ಪ್ರಕೃತಿಯ ಅನುಭೂತಿಯಿಂದದೈವತ್ವದೆಡೆಗೆ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು

//ಪ್ರಕೃತಿಯ ಅನುಭೂತಿಯಿಂದದೈವತ್ವದೆಡೆಗೆ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು

ಪ್ರಕೃತಿಯ ಅನುಭೂತಿಯಿಂದದೈವತ್ವದೆಡೆಗೆ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು

ಸುತ್ತೂರು, ಮಾರ್ಚ್-21: ಪ್ರಕೃತಿಯಲ್ಲಿರುವಪ್ರತಿಯೊಂದುಜಡಹಾಗೂ ಜೀವಿಯೂಒಂದು ದಿನ ಮರೆಯಾಗುತ್ತವೆ, ಆದರೆಜೀವಸತ್ವಮತ್ತುದೈವತ್ವಚಿರಾಯು. ಈ ತತ್ವವನ್ನು ಪಕೃತಿಯಅನುಭೂತಿಯಿಂದ ಚಿಂತಿಸಿದಾಗದೈವತ್ವ ಪಡೆಯಲು ಸಾಧ್ಯಎಂದು ವಿಜಯಪುರದಜ್ಞಾನಯೋಗಾಶ್ರಮದಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಸುತ್ತೂರು ಶ್ರೀಕ್ಷೇತ್ರದಲ್ಲಿ ಮಾರ್ಚ್21ರಂದು ಪ್ರವಚನ ನೀಡುತ್ತಾ ತಿಳಿಸಿದರು.

ಪ್ರಕೃತಿಂiÀiಲ್ಲಿಅಸಂಖ್ಯಾತ ವಸ್ತುಗಳು ಇವೆ,ಆದರೆ ಅವುಗಳು ಸದಾಕಾಲಇರಲು ಸಾಧ್ಯವಿಲ್ಲ. ಪ್ರತಿಕ್ಷಣಗ್ಯಾಲಕ್ಸಿಯಿಂದ ಹಿಡಿದುಅಣುವಿನಲ್ಲಿಚಲನೆಯನ್ನುಕಾಣುತ್ತೇವೆ. ಇದುವೇಜಗತ್ತಿನ ಪ್ರಮಾಣ. ಇಲ್ಲಿರುವಯಾವುದೇ ವಸ್ತುವನ್ನು ಮನುಷ್ಯ ನಿರ್ಮಿಸಲು ಸಾಧ್ಯವಿಲ್ಲ.ಭೂಮಿ, ಸೂರ್ಯ, ಚಂದ್ರ, ವಿಶ್ವಸಮೇತಒಂದು ದಿನ ಕಣ್ಮರೆಯಾಗುತ್ತವೆ. ಈ ವಿಶ್ವದಲ್ಲಿ ವಾಸಿಸುತ್ತಿರುವ ಮನುಷ್ಯ ಎಷ್ಟೆ ಬುದ್ದಿವಂತ, ಶಕ್ತಿವಂತ ಮತ್ತು ಸೌಂದರ್ಯವುಳ್ಳವನಾಗಿದ್ದರೂ ಕೊನೆಗೊಂದು ದಿನ ಅದುವಿಶ್ವÀದೊಂದಿಗೆಕಣ್ಮರೆಯಾಗುತ್ತದೆ, ಕಾರಣ ನಾವೂಸಹ ಅದರಒಂದು ಭಾಗ. ಇದನ್ನು ಬದಲಾಯಿಸಲುಯಾರಿಂದಲೂ ಸಾಧ್ಯವಿಲ್ಲ, ಇದುವೇ ಪ್ರಕೃತಿಯ ನಿಯಮ, ಇದುವೇಜಗತ್ತಿನ ನಿಜವಾದ ಸತ್ಯ.ಪ್ರಕೃತಿಯಲ್ಲಿರುವ ಪ್ರತಿ ವಸ್ತುವಿನಲ್ಲಿ ಏನೊ ಒಂದು ಶಕ್ತಿ ಇರುವಂತೆ ಮನುಷ್ಯನಲ್ಲಿಯೂಇದೆ, ಅದನ್ನು ಪದಗಳಿಂದ ಅಥವಾ ಹೆಸರಿನಿಂದ ವರ್ಣಿಸಲು ಸಾಧ್ಯವಿಲ್ಲ. ರವಿ ಕಾಣದ್ದನ್ನು ಕವಿ ಕಂಡಎನ್ನುವಂತೆಜಿಜ್ಞಾಸುಯಾದವನು ಪ್ರಕೃತಿಯಲ್ಲಿದೈವದಅನುಭೂತಿಯನ್ನು ಅನುಭವಿಸಿಅದ್ಭುತಎಂದು ಹೇಳಿದ.ದೈವತ್ವಎನ್ನುವುದು ಮಹಾಸಾಗರದಂತೆ, ಮೀನುಗಳು ಅದರಲ್ಲಿ ವಾಸಿಸುವ ಜೀವಿಗಳು, ಸಾಗರಇಲ್ಲದೆ ಹೋದರೆ ಮೀನುಗಳ ಅಸ್ತಿತ್ವವೇ ಇಲ್ಲ. ಸಾಗರ ಮೀನುಗಳನ್ನು ಪ್ರೀತಿಸುವುದೂಇಲ್ಲ, ದ್ವೇಷಿಸುವುದೂಇಲ್ಲ. ದೈವತ್ವಎನ್ನುವ ಮಹಾಸಾಗರದಲ್ಲಿ ಮನುಷ್ಯರುಚಿಕ್ಕ ಮೀನುಗಳಂತೆ. ಮನುಷ್ಯತನ್ನ ಅಸ್ತಿತ್ವಕ್ಕೆ ದೈವತ್ವಎನ್ನುವ ಮಹಾಸಾಗರದಲ್ಲಿಇರಲೇಬೇಕು, ಇದು ಸತ್ಯ.ದೈವತ್ವವನ್ನುಅರಿತಾಗಜೀವನವನ್ನು ಆನಂದಿಸಲು ಸಾಧ್ಯ.ಪ್ರಕೃತಿಗಿಂತದೊಡ್ಡದು ಬೇರೆಇಲ್ಲ ಮತ್ತುಅದಕ್ಕೆ ಸರಿಸಮಾನವಾದದ್ದು ಏನೂ ಇಲ್ಲ. ಪ್ರಕೃತಿಗೆ ಪ್ರಕೃತಿಯೇ ಸಮ.ಇದೆ ಪ್ರಕೃತಿಯದೈವಿಕತತ್ವ.ನಾವು ವಾಸಿಸುವಪ್ರಕೃತಿಯನ್ನುದೈವತ್ವದಅನುಭೂತಿಯಿಂದಅನುಭವಿಸಿದಾಗ ಜೀವನ ಸ್ವಚ್ಛ, ಶಾಂತ, ಹಾಗೂ ಸಂತೋಷವಾರುತ್ತದೆ.ಈ ಮಹಾನ್‍ದೈವಿಕ ವಾಸ್ತವದಅನುಭವವನ್ನು ಪಡೆಯುವುದೆ ಸಾಕ್ಷಾತ್ಕಾರಎಂದು ತಿಳಿಸಿದರು.

2021-03-22T10:03:14+00:00